ಕೊಪ್ಪಳ : ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಜಾಮಿಯಾ ಮಸ್ಜಿದ್ ಕಮಿಟಿ ವತಿಯಿಂದ ಶೋಷಣೆ ಮುಕ್ತ ಸಮಾಜದ ಪ್ರತಿಪಾದಕ, ಮಹಾನ್ ಮಾನವತಾವಾದಿ, ಲೋಕ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ರವರ ಜಯಂತೋತ್ಸವವನ್ನು ಭಾವೈಕ್ಯತೆಯಿಂದ ಶಾಂತಿ ಸೌಹಾರ್ದಕ್ಕೆ ಮಾದರಿಯಾಗುವಂತೆ ಅದ್ದೂರಿಯಾಗಿ ಆಚರಿಸಲಾಯಿತು
ಪೊಲೀಸ್ ಇಲಾಖೆ ಸೇರಿದಂತೆ, ಊರಿನ ಗುರುಹಿರಿಯರು, ಯುವ ಮಿತ್ರರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಇದೆ ವೇಳೆ ಮಂಜುನಾಥ ಸ್ಪೋರ್ಟ್ ಕ್ಲಬ್ ಸಂಘದ ವತಿಯಿಂದ ಮುಸ್ಲಿಂ ಬಾಂಧವರಿಗೆ ಸಿಹಿ, ಹಣ್ಣು, ಹಂಪಲು ಹಂಚಿ,ಕೊಪ್ಪಳ ಜಿಲ್ಲೆಯ ಗಿಣಿಗೇರಿ ಗ್ರಾಮದಲ್ಲಿ ಸೌಹಾರ್ದತೆ ಮೆರೆದಿದ್ದಾರೆ
ಈ ಸಂದರ್ಭದಲ್ಲಿ ಸುರೇಶ ಮೂರಮನಿ, ಶಿವು ಹೂಗಾರ್, ಮಹೇಶ್ ಪೂಜಾರ, ಜಗದೀಶ್ ಗೊಟಹನುಮವ್ವನವರ,ರಾಜು ಕೊಲ್ಕರ್, ಯಮನೂರ್, ಶ್ರೀಕಾಂತ್ ಪೂಜಾರಿ, ರಾಜು ಗೌಳಿ, ಸೋಮು ಬಾವಿ, ಜಗದೀಶ್, ಹನುಮಂತ್,ವರುಣ್ ಆರ್ ಹಲಿಗೆರಿ, ಸೇರಿದಂತೆ ಅನೇಕರು ಮಂಜುನಾಥ್ ಸ್ಪೋರ್ಟ್ಸ್ ಕ್ಲಬ್ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗಿಣಿಗೇರ ಊರಿನ ಗುರು ಹಿರಿಯರು ಉಪಸ್ಥಿತರಿದ್ದರು
