ಕೊಪ್ಪಳ. ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮ್ಯೂಸಿಕ್ ಮೈಲಾರಿ ಮತ್ತು ಮಂಜು ಕುಕನೂರು ಸೇರಿ ಬಹಿರಂಗವಾಗಿ ಅಶ್ಲೀಲ ಹಾಡನ್ನು ಹಾಡಿದ್ದಾರೆ ಎಂದು ಕೊಪ್ಪಳ ಜಿಲ್ಲೆ ಕಲಾವಿದರು ಹಾಗೂ ಸಂಘಟನೆಯವರು ಪೊಲೀಸ್ ಮೆಟ್ಟಿಲೇರಿದ್ದಾರೆ.

ಕಳೆದ 3 ತಿಂಗಳಿನಿಂದ ಉತ್ತರಕರ್ನಾಟಕ ಭಾಗದ ಕಲಾವಿದರು ಅಶ್ಲೀಲ ಹಾಡು.ಕಾರ್ಯಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿ ರಾಜ್ಯ ಮಹಿಳಾ ಆಯೋಗ ಹಾಗೂ ಪೊಲೀಸ್ ಕಮಿಷನರ್ ಅವರಿಗೂ ಮನವಿ ಮಾಡಿದ್ದಾರೆ.

ಈಗ ಮ್ಯೂಸಿಕ್ ಮೈಲಾರಿ ಹಾಗೂ ಮಂಜು ಕುಕನೂರು ಅಶ್ಲೀಲ ಹಾಡಿ ಮಹಿಳೆಯರ ಮೇಲೆ ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ನೀಡಿದ್ದಾರೆ.

ವರದಿ. ಸಂಪಾದಕೀಯ

By Pradeep

Leave a Reply

Your email address will not be published. Required fields are marked *